Tuesday, June 7, 2016

ಅಮೃತವಾಣಿ - ೧೪

ನ ತಾದೃಗ್ಜಾಯತೇ ಸೌಖ್ಯ೦ ಅಪಿ ಸ್ವಗೇ೯ ಶರೀರಿಣಾ೦ |
ದಾರಿದ್ರೆಧಿಪಿ ಹಿ ಯಾದೃಕ್ ಸ್ಯಾತ್ ಸ್ವದೇಶೇ ಸ್ವಪುರೇ ಗೃಹೇ ||
ಬಡತನವಿದ್ದರೂ ಯಾವಾಗಲಾದರೂ ಬ೦ದ ಅಲ್ಪಸ್ವಲ್ಪ ಸುಖವು ತಾನು ನೆಲೆಸಿದ ದೇಶ, ರಾಜ್ಯ, ಊರು, ಮನೆಯಲ್ಲಿ ವಿಶಿಷ್ಟ ಅನುಭವವನ್ನು ಕೊಡುತ್ತದೆ. ಇ೦ಥ ಸುಖಾನುಭವವು ಮನುಜರಿಗೆ ಸ್ವಗ೯ಲೋಕದಲ್ಲೂ ದೊರೆಯುವದಿಲ್ಲ. ಅನೇಕ ಸಾರಿ ಪ್ರಪ೦ಚಪರ್ಯಟನ ಮಾಡಿ ಬ೦ದರೂ ಅಭೀಮಾನದಿ೦ದ ಸೃಷ್ಟಿಯಾದ ನಮ್ಮ ಮನೆಯಲ್ಲಿಯೇ ಸುಖನಿದ್ರೆ ಬರುತ್ತದೆ. ಇದು ಎಲ್ಲರಿಗೂ ಅನುಭವವೇದ್ಯ.

|ಪ೦ಚತ೦ತ್ರ/ಸ೦ಗ್ರಹ, ವ್ಯಾಖ್ಯಾನ:ಪ೦ಡಿತ ಸಮೀರಾಚಾಯ೯ ಕ೦ಠಪಲ್ಲೀ
|ಮೂಲ ಸಂಗ್ರಹ: ವಿಜಯವಾಣಿ 

ಅಮೃತವಾಣಿ - ೧೩

ಪುರಾ ಸರಸಿ ಮಾನಸೇ ವಿಕಚಸಾರಸಾಳಿಸ್ಖಲತ್ ಪರಾಗಸುರಭೀಕೃತೇ ಪಯಸಿ ಯಸ್ಯ ಯಾತಂ ವಯಃ |
ಸ ಪಲ್ವಲ ಜಲೇಧುನಾ ಮಿಲದನೇಕಭೇಕಾಕುಲೇ ಮರಾಳಕುಲನಾಯಕಃ ಕಥಯ ರೇ ಕಥಂ ವರ್ತತಾಮ್ ||
 
ಜ್ವಲಿಸುವ ಬೆಂಕಿಗೆ ಸೂರ‍್ಯನ ಆಶ್ರಯ ದೊರೆತಾಗ ಅದು ಮತ್ತಷ್ಟು ಪ್ರಜ್ವಲಿಸುತ್ತದೆ. ಹಾಗೆಯೇ ರಾತ್ರಿಯ ಆಶ್ರಯ ಹಿಂದೆ ಹಂಸವು ಮಾನಸಸರೋವರದಲ್ಲಿ ಅನೇಕ ಕಮಲಪುಷ್ಪಗಳಿಂದ ದ್ರವಿಸುವ ಮಕರಂದದಿಂದ ಕೂಡಿದ ಸುಗಂಧಮಯ ನೀರಿನಲ್ಲಿ ತನ್ನ ಆಯುಷ್ಯದ ಎಷ್ಟೋ ದಿನಗಳನ್ನು ಆನಂದದಿಂದ ಕಳೆಯಿತು. ಅದೇ ಹಂಸವು ಈಗ ವಟಗುಟ್ಟುವ ಕಪ್ಪೆಗಳಿಂದ ತುಂಬಿದ, ಮಲಿನ ಜಲಾಶಯದಲ್ಲಿ ಇರಲು ಹೇಗೆ ಸಾಧ್ಯ? ಅದರಂತೆ ಕಾವ್ಯ-ಸಾಹಿತ್ಯರಸಿಕರ ಮಧ್ಯೆ ಕಾಲ ಕಳೆಯುವ ವಿದ್ವಾಂಸನು ಮೂರ್ಖರ ನಡುವೆ ವಾಸಿಸುವುದಾದರೂ ಹೇಗೆ?
 
| ಭಾಮಿನೀವಿಲಾಸ / ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ
| ಮೂಲ ಸಂಗ್ರಹ: ವಿಜಯವಾಣಿ 

Saturday, April 2, 2016

ಅಮೃತವಾಣಿ - ೧೨



ತ್ಯಕ್ತವ್ಯೋ ಮಮಕಾರಃ ತ್ಯಕ್ತುಂ ಯದಿ ಶಕ್ಯತೇ ನಾಸೌ |
ಕರ್ತವ್ಯೋ ಮಮಕಾರಃ ಕಿಂ ತು ಸರ್ವತ್ರ ಕರ್ತವ್ಯಃ ||

ನಾನು-ನನ್ನದು ಎಂಬ ಭಾವನೆಗಳನ್ನು ಬಿಡುವುದು ಸರ್ವೋತ್ತಮವಾದ ಕಾರ್ಯ. ಆದರೆ ಅದನ್ನು ಬಿಡಲು ಸಾಧ್ಯವಾಗದಿದ್ದರೆ ಮಮಕಾರವನ್ನು ಆಚರಿಸೋಣ.ಅಂದರೆ ಎಲ್ಲರ ಬಗ್ಗೆಯೂ ಇವರು ನನ್ನವರು ಎಂದು ಭಾವಿಸೋಣ. ಅವರಿಗೆ ಬಂದ ಕಷ್ಟಗಳನ್ನು ತನ್ನ ಕಷ್ಟಗಳೇ ಎಂದು ತಿಳಿದು ಪರಿಹರಿಸಲು,ಸಾಂತ್ವನ ಹೇಳಲು ಪ್ರಯತ್ನಿಸೋಣ. ಅವರ ಆಧ್ಯಾತ್ಮ ಸಂತೋಷದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನಮ್ಮ ಕಾರ್ಯಕ್ರಮ ಎಂದು ಹೆಮ್ಮೆಯಿಂದ ಅಧಿಕವಾದ ಸಂತೋಷವನ್ನು ಅನುಭವಿಸೋಣ

| ವೈರಾಗ್ಯಶತಕ / ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ.
| ಮೂಲ ಸಂಗ್ರಹ: ವಿಜಯವಾಣಿ .