Sunday, April 14, 2019

ಅಮೃತವಾಣಿ - ೧೬

ಯತ್ರ ಸರ್ವೇsಪಿ ನೇತಾರಃ ಸರ್ವೇ ಪಂಡಿತಮಾನಿನಃ |
ಸರ್ವೇ ಮಹತ್ವಮಿಚ್ಛಂತಿ ತತ್ರ ಕಾರ್ಯಂ ವಿನಶ್ಯತಿ ||

ಒಂದು ಸಂಸ್ಥೆ ಅಥವಾ ಸಮೂಹ ಇದ್ದಾಗ ಅಲ್ಲಿ ಎಲ್ಲರೂ ತಾವೇ ನಾಯಕರಾಗಬೇಕು,
ತಮ್ಮ ಮಾತೇ ಅಂತಿಮವಾಗಬೇಕು ಎಂಬ ಮನೋಭಾವ ಇದ್ದರೆ ಆ ಸಂಸ್ಥೆ-ಸಮೂಹಗಳು ಅಧಃಪತನ ಹೊಂದುತ್ತವೆ.
ತನ್ನನ್ನು ಹೊರತುಪಡಿಸಿ ಅನ್ಯ ಪಂಡಿತನೇ ಇಲ್ಲ, ಜನರೆಲ್ಲ ತನ್ನನ್ನೇ ಪಂಡಿತ ಎಂದು ತಿಳಿಯುತ್ತಾರೆ ಎಂದು ತಿಳಿಯುವುದೂ ಮೂರ್ಖತನವೇ ಆಗಿದೆ.
ಹಾಗೆಯೇ ಎಲ್ಲೆಡೆಯೂ ಪ್ರಥಮ ಸ್ಥಾನ ತನ್ನದೇ ಆಗಬೇಕು, ತನಗೆ ಮಹತ್ವ ಸಿಗಬೇಕು ಎಂದು ಭಾವಿಸಿದರೆ - ಆ ರೀತಿಯಲ್ಲಿ ವರ್ತಿಸಿದರೆ ಕಾರ್ಯ ವಿನಾಶವಾಗುತ್ತದೆ. ಆದ್ದರಿಂದ ಸೌಜನ್ಯ-ವಿನಯಗಳನ್ನು ಜೀವನದಲ್ಲಿ ಅವಶ್ಯವಾಗಿ ರೂಢಿಸಿಕೊಳ್ಳಬೇಕು.

| ನೀತಿಮುಕ್ತಾವಲಿ / ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ
ಮೂಲ ಸಂಗ್ರಹ: ವಿಜಯವಾಣಿ

Friday, April 12, 2019

ಅಮೃತವಾಣಿ - ೧೫


ವಿನಾ ಕಾರ್ಯೇಣ ಯೇ ಮೂಢಾ ಗಚ್ಛಂತಿ ಪರಮಂದಿರಂ|
ಅವಶ್ಯಂ ಲಘುತಾಂ ಯಾಂತಿ ಕೃಷ್ಣಪಕ್ಷೇ ಯಥಾ ಶಶೀ||

ಸುಜ್ಞಾನಿಗಳು, ಗುರುಗಳು ಇವರನ್ನು ಹೊರತುಪಡಿಸಿ ವಿನಾಕಾರಣ ಇತರರ (ಅದರಲ್ಲಿಯೂ ವಿಶೇಷವಾಗಿ ಅಹಂಕಾರಯುಕ್ತರಾದ ಧನವಂತರ) ನಿವಾಸಗಳಿಗೆ ವೃಥಾ ಹೋಗಬಾರದು. ಆಮಂತ್ರಣ ಇದ್ದರೆ, ಅಲ್ಲಿ ಪ್ರೀತಿ ವಿಶ್ವಾಸಗಳು ಇದ್ದರೆ ಮಾತ್ರ ಹೋಗಬೇಕು. ಕರೆಯದೆ ಇದ್ದರೂ ಅಲ್ಲಿಗೆ ಹೋದರೆ ಅಂಥವರು ಮೂರ್ಖರೇ ಸರಿ.

|| ಸುವಚನರತ್ನಾವಲಿ / ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ
ಮೂಲ ಸಂಗ್ರಹ: ವಿಜಯವಾಣಿ