Thursday, September 9, 2010

ದೇವರ ಕೆಲಸ ...!!!

ಸರ್ಕಾರಿ ನೌಕರರು ಯಾಕೆ ಮೊದಲು ತಮ್ಮ ಹೊಟ್ಟೇನಾ ತುಂಬಿಸ್ಕೊತಾರೆ ( ಭ್ರಷ್ಟಾಚಾರ )

ವಿಧಾನ ಸೌಧ ನೋಡಿದೋರ್ ಮಾತ್ರ ತಿಳ್ಕೊತಾರೆ - ಸರ್ಕಾರದ ಕೆಲಸ ದೇವರ ಕೆಲಸ

ದೇವರ ಕೆಲಸ ಹೊಟ್ಟೇ ತುಂಬಿಸ್ಕೊಂಡೇ ಮಾಡೋದು... :) ಏನಂತೀರಾ ?

Monday, May 24, 2010

ಸಾಧಕನೆಂದರೆ ಯಾರವನು?


ಅನ್ವೇಷಕನಿಗೆ ದೊರೆತ ಆ ಹಳೆಯ ಕಾಗದ, ಓದಿದಾಗ ನಿಮಗೂ ತಿಳಿಸಬೇಕೆಂಬ ಹಂಬಲದಿಂದ ಕವಿತೆ ...

ನಿಮಗಾಗಿ ಸ್ನೇಹಿತರೆ ಇಗೋ ಇಲ್ಲಿದೆ ಒಂದು ಒಳ್ಳೆಯ ಚೈತನ್ಯದ ಚಿಲುಮೆ ...
ಸಾಧಕನೆಂದರೆ ಯಾರವನು?
ಸಾಧಕನೆಂದರೆ ಯಾರವನು?
ಭೇದವ ಮರೆತಿಹ ಮಾನವನು
ಸಾಧಕನೆಂದರೆ ಯಾರವನು?
ಸಾದಾ ನಡತೆಯ ಸಜ್ಜನನು!
ಸಾಧಕನೆಂದರೆ ಯಾರವನು?
ಸಾಧಿಸಿ ಹರಿಯ ಪಾಡುವನು!
ಸಾಧಕನೆಂದರೆ ಯಾರವನು?
ವೇದವ  ಕೇಳುತ ಬಾಳುವನು !
ಸಾಧಕನೆಂದರೆ ಯಾರವನು?
ವಾದವ ವರ್ಜಿಸಿ ಮಣಿಯುವನು!
ಸಾಧಕನೆಂದರೆ ಯಾರವನು?
ಕಾದಿಹ ಬುತ್ತಿಯ ಉಣ್ನುವನು!
ಸಾಧಕನೆಂದರೆ ಯಾರವನು?
ವೇದನೆ ದೂಡುತ  ದುಡಿಯುವನು!
ಸಾಧಕನೆಂದರೆ ಯಾರವನು?
ನಾದದಿ ವಿನಯದಿ ಬೇಡುವನು!
ಸಾಧಕನೆಂದರೆ ಯಾರವನು?
ತೇದುತ ತನುಮನ ಬಾಡುವನು!
ಸಾಧಕನೆಂದರೆ ಯಾರವನು?
ಮೋದದಿ ಧ್ಯಾನವ ಮಾಡುವನು!
ಸಾಧಕನೆಂದರೆ ಯಾರವನು?
ರೊಧಿಸಿ ಗುರಿಯನು ದಾಟುವನು!
ಸಾಧಕನೆಂದರೆ ಯಾರವನು?
ಶೋಧಿಸಿ ಇಷ್ಟವ ಪಡೆಯುವನು!

ಮೂಲ:  ವಿವೇಕ ಸಂಪದ - ಸಂಕ್ರಾಂತಿ ಸಂಚಿಕೆ
 

Thursday, April 15, 2010

ದಿಕ್ಸೂಚಿ !



ನನಗರಿವಿಲ್ಲದೆ ನಾ ಕಳೆದು ಹೋದೆ ...
ಏನಾಯಿತೋ ನಾ ತಿಳಿಯದೆ ಹೋದೆ ..
ಕಣ್ಣಿದ್ದು ಕುರುಡನಾದಂತಿದೆ ..
ಕಿವಿಯಿದ್ದು ಕಿವುಡನಾದಂತಿದೆ ..
ಮಾತು ಮೌನ ಕೇಳುತಿದೆ...
ಮೌನ ಏಕಾಂಗಿಯೆನುಸಿತಿದೆ ..
ಏಕಾಂಗಿ ನನ್ನೇ ನಾ ಕಂಡಂತಿದೆ ...
ನನ್ನತನ ನನ್ನನ್ನೇ ಅನಕಿಸುವಂತಿದೆ
ಬೆಳಕನ್ನು ಕಾಣಲು ನನಗೀಗ
ದಿಕ್ಸೂಚಿಯೊಂದು ಬೇಕಾಗಿದೆ ...!