Friday, December 11, 2015

ಅಮೃತವಾಣಿ - ೧೧

ಅಲ೦ಕಾರಪ್ರಿಯಾ ಹ್ಯಲಾ ಮಹಾ೦ತೋ ಗುಣಭೂಷಣಾಃ  |
ನೂಪುರೇಣ ಲಸತ್ಯ೦ ನೇತ್ರ೦ ಪಶ್ಯ ನ ಭೂಷ್ಯತೇ | |
ಅಲ್ಪಜನರು ಅಲ೦ಕಾರಪ್ರಿಯರು. ಅವರು ವಸ್ತ್ರ-ಆಭರಣಾದಿಗಳಿ೦ದ ಸ೦ತೋಷಪಡುತ್ತಾರೆ. ಆದರೆ ಮಹಾತ್ಮರು ಔದಾಯ೯, ವಿನಯ ಇತ್ಯಾದಿ ಸದ್ಗುಣಗಳಿ೦ದ ಭೂಷಿತರಾಗಿ ಸ೦ಭ್ರಮಪಡುತ್ತಾರೆ. ಗೆಜ್ಜೆ, ಕಡಗ ಈ ಭೂಷಣಗಳಿ೦ದ ಪಾದವು ಶೋಭೀಸುತ್ತದೆ. ಆದರೆ ಕಣ್ಣುಗಳಿಗೆ ಯಾವುದೇ ಭೂಷಣಗಳ ಆವಶ್ಯಕತೆ ಇಲ್ಲ. ದೇಹದಲ್ಲಿ ಸ್ವತಃ ನಯನಗಳೇ ಭೂಷಣಪ್ರಾಯವಾಗಿರುತ್ತವೆ. 

          ~ದೃಷ್ಟಾ೦ತಶತಕ/ಸ೦ಗ್ರಹ, ವ್ಯಾಖ್ಯಾನ: ಪ೦ಡಿತ ಸಮೀರಾಚಾಯ೯ ಕ೦ಠಪಲ್ಲೀ

ಅಮೃತವಾಣಿ - ೧೦

ಶ್ರುತ್ವಾ ಧಮ೯೦ ವಿಜಾನಾತಿ ಶ್ರುತ್ವಾ ತ್ಯಜತಿ ದುಮ೯ತಿ೦ |
ಶ್ರುತ್ವಾ ಜ್ಞಾನಮಾಪ್ನೋತಿ ಶ್ರುತ್ವಾ ಮೋಕ್ಷಮಾಪ್ನುಯಾತ್ ||
ಪುರಾಣ, ಇತಿಹಾಸ, ಧಮಾ೯ಶಾಸ್ತ್ರಾದಿಗಳನ್ನು ಶ್ರವಣ ಮಾಡುವುದರಿ೦ದ, ವಿಚಾರ-ಮಥನ ಮಾಡುವುದರಿ೦ದ ಪ್ರಮೇಯಗಳನ್ನು, ಧಮ೯ರಹಸ್ಯಗಳನ್ನು ತಿಳಿಯಲು ಶಕ್ಯವಾಗುತ್ತದೆ. ಹಾಗೆಯೇ ಸಹೃದಯೀ ವಿದ್ವಾ೦ಸರ ಮಾತುಗಳನ್ನು ಆಲಿಸಿ ಸುಜ್ಞಾನವನ್ನು ಪಡೆದುಕೊಳ್ಳುವುದರಿ೦ದ ಸಾ೦ಸಗಿ೯ಕವಾಗಿ ಬ೦ದಿರುವ ದುಗು೯ಣಗಳು ಮಾಯವಾಗುತ್ತವೆ. ಗುರುವಯ೯ರ ಉಪದೇಶಾಮೃತವನ್ನು ಪಾನಮಾಡುವುದರಿ೦ದ ಮೋಕ್ಷದ ಬಾಗಿಲು ತೆರೆಯುತ್ತದೆ

ಚಾಣಕ್ಯನೀತಿ/ಸ೦ಗ್ರಹ, ವ್ಯಾಖ್ಯಾನ: ಪ೦ಡಿತ ಸಮೀರಾಚಾಯ೯ ಕ೦ಠಪಲ್ಲೀ

Sunday, September 13, 2015

ಅಮೃತವಾಣಿ - ೯

~ ಅಧ್ಯಾತ್ಮ ~

ಆತ್ಮಾನಂ ಅನಭಿಜ್ಞಾಯ ವಿವೇಕ್ತುಂ ಯೋsನ್ಯದಿಚ್ಛತಿ |
ತೇನ ಭೌತೇನ ಕೀಂ ವಾಚ್ಯಂ ಪ್ರಶ್ನೇsಸ್ಮಿನ್ ಕೋ ಭವಾನಿತಿ ||

ತಾನು ಯಾರು? ಎಲ್ಲಿಂದ ಬಂದಿದ್ದೇನೆ? ಯಾಕೆ ಬಂದಿದ್ದೇನೆ? ಎಂದು ತಿಳಿಯುವ ಗೋಜಿಗೆ ಹೋಗದೆ ಕೇವಲ ಪರವಸ್ತುವಿನ ಬಗ್ಗೆ, ಪರರ ಬಗ್ಗೆ, ಪರವೂರಿನ ಬಗ್ಗೆ ತಿಳಿಯಲು ಹಾತೊರೆಯುವ ವ್ಯಕ್ತಿಗೆ, ನೀನು ಯಾರು? ಎಂದು ಪ್ರಶ್ನಿಸಿದರೆ ಅವನು ತನ್ನ ಬಗ್ಗೆ ತಿಳಿಯದಿದ್ದರೆ ಬದುಕಿಯೂ ಏನು ಪ್ರಯೋಜನ? ಬದುಕಿರುವಾಗ ಆತ್ಮಸ್ವರೂಪವನ್ನು ತಿಳಿಯುವುದು ಅತ್ಯಂತ ಮುಖ್ಯ. ಹಿರಿಯರು ಇದನ್ನೇ ಅಧ್ಯಾತ್ಮ ಎಂದು ಕರೆಯುತ್ತಾರೆ.


~ ಅಭಿನವಗುಪ್ತ /ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ
| ಮೂಲ ಸಂಗ್ರಹ: ವಿಜಯವಾಣಿ

Friday, September 11, 2015

ಅಮೃತವಾಣಿ - ೮

~ ಸಜ್ಜನ ~

ಕೃಪಾಲುರಕೃತದ್ರೋಹಃ ತಿತಿಕ್ಷುಃ ಸರ್ವದೇಹಿನಾಮ್ |
ಸತ್ಯಸಾರೋs ನವದ್ಯಾತ್ಮಾ ಸಮಃ ಸರ್ವೋಪಕಾರಕಃ ||

ಸಜ್ಜನನು ಕೃಪೆಯ ಸಾಕಾರವಾಗಿರುತ್ತಾನೆ. ಅವನು ಯಾರ ಬಗ್ಗೆಯೂ ವೈರಭಾವ ಹೊಂದದೆ, ಅವರ ಸದ್ಗುಣಗಳನ್ನು ಎಲ್ಲರಿಗೂ ತಿಳಿಸುತ್ತಾನೆ. ಅಸಹನೀಯ ದುಃಖ ಉಂಟಾದರೂ ಅದನ್ನು ತೋರ್ಪಡಿಸದೆ ಸಹಿಸುತ್ತ ದೇವರನ್ನು ನೆನೆಯುತ್ತ ಸಂತೋಷದಿಂದಿರಲು ಪ್ರಯತ್ನಿಸುತ್ತಾನೆ. ಪಾಪಕೃತ್ಯಗಳಿಂದ ದೂರವಾಗಿರುತ್ತಾನೆ.
ಮನಸ್ಸಿನಲ್ಲಿಯೂ ಅಂಥ ವಿಚಾರ ಮಾಡದೆ ಎಲ್ಲರಿಗೂ ಒಳ್ಳೆಯದಾಗಲೆಂದು ಸದಾ ಆಶಿಸುತ್ತಿರುತ್ತಾನೆ.

~ ಶ್ರೀಕೃಷ್ಣಭಾರತೀ /ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ

| ಮೂಲ ಸಂಗ್ರಹ: ವಿಜಯವಾಣಿ


Monday, April 6, 2015

ಭಕ್ತಿಯ ಶಕ್ತಿ ... !!!




ಭಕ್ತಿಯು  ಸೇರಿದರೆ ಅನ್ನಕ್ಕೆ,
ಅನ್ನವು  ಪ್ರಸಾದವು,
ಭಕ್ತಿಯು  ಸೇರಿದರೆ ನೀರಿಗೆ      
ನೀರು ತೀ‍ರ್ಥ / ಚರಣಾಮೃತವು,
ಭಕ್ತಿಯು  ಸೇರಿದರೆ ಹಸಿವಿಗೆ,
ಹಸಿವು ಉಪವಾಸವು,
ಭಕ್ತಿಯು  ಸೇರಿದರೆ ಪ್ರಯಾಣಕ್ಕೆ,
ಪ್ರಯಾಣವು ತೀರ್ಥಯಾತ್ರೆಯು,
ಭಕ್ತಿಯು  ಸೇರಿದರೆ ಸಂಗೀತಕ್ಕೆ,
ಸಂಗೀತವು ಕೀರ್ತನೆಯು,
ಭಕ್ತಿಯು  ಸೇರಿದರೆ ಮನೆಗೆ,
ಮನೆಯು ಮಂತ್ರಾಲಯವು,
ಭಕ್ತಿಯು  ಸೇರಿದರೆ ಕಾಯಕವ,
ಕಾಯಕವು ಸೇವೆಯು,
ಭಕ್ತಿಯು  ಸೇರಿದರೆ ಕೆಲಸಕ್ಕೆ,
ಕೆಲಸವು ಕರ್ಮವು,
ಮತ್ತು
ಭಕ್ತಿಯು  ಸೇರಿದರೆ ಮನುಷ್ಯನ,
ಮನುಷ್ಯನು ಮಾನವನು – ಆಗಿ ಪರಿವರ್ತನೆ ಆಗುವುದು.

ಭಕ್ತಿಯ ಜೊತೆಗೆ  ಜ್ಞಾನ, ನಂಬಿಕೆ ಹಾಗೂ ಧಾರಣೆಗಳಿಂದ ಇವು ತುಂಬ ಸುಲಭವಾಗಿ ಪರಿವರ್ತನೆಯಾಗುವುವು.

~ ಅನಾಮಧೇಯ

Saturday, January 24, 2015

ಅಮೃತವಾಣಿ - ೭

ಪ್ರದಾನಂ ಪ್ರಚ್ಛನ್ನಂ ಗೃಹಮುಪಗತೇ ಸಂಭ್ರಮವಿಧಿಃ ಪ್ರಿಯಂ ಕೃತ್ವಾ ಮೌನಂ ಸದಸಿ ಕಥನಂ ಚಾಪ್ಯುಪಕೃತೇಃ |
ಅನುತ್ಸೇಕೋ ®PÁëöäöå ನಿರಭಿಭವಸಾರಾಃ ಪರಕಥಾಃ ಸತಾಂ ಕೇನೋದ್ದಿಷ್ವಂ ವಿ‌ಷಮಸಿಧಾರಾವ್ರತಮಿದಮ್ ||

ರಹಸ್ಯವಾಗಿ ದಾನ ಮಾಡುವುದು, ಮನೆಗೆ ಬಂದ ಅತಿಥಿ-ಅಭ್ಯಾಗತರನ್ನು ಸಂತೋಷದಿಂದ ಸತ್ಕರಿಸುವುದು, ಮಾಡಿದ ಸತ್ಕಾರ್ಯಗಳ ಬಗ್ಗೆ ಹೇಳಿಕೊಳ್ಳದಿರುವುದು, ಇತರರು ಮಾಡಿದ ಉಪಕಾರವನ್ನು ಸಾರ್ವಜನಿಕವಾಗಿ ಹೇಳುವುದು, ಐಶ್ವರ್ಯ ಬಂದಾಗ ಅದನ್ನು ಗತ್ತಿನಿಂದ ಪ್ರದರ್ಶಿಸದಿರುವುದು, ಮತ್ತೊಬ್ಬರ ಬಗ್ಗೆ ಮಾತನಾಡುವಾಗ ನಿಂದನೆಯ ಶಬ್ದಗಳು ಬರದಂತೆ ಜಾಗೃತೆ ವಹಿಸುವುದು - ಹೀಗೆ ಅಲಗಿನ ಮೇಲಿನ ನಡೆಯಂತಿರುವ ಕಠೋರ ವೃತವನ್ನು ಸಜ್ಜನರಿಗೆ ಯಾರು ವಿಧಿಸಿರಬಹುದು?

| ನೀತಿ ಶತಕ / ಸಂಗ್ರಹ, ವ್ಯಾಖ್ಯಾನ: ಪಂಡೀತ ಸಮೀರಾಚಾರ್ಯ ಕಂಠಪಲ್ಲೀ
|ಮೂಲ ಸಂಗ್ರಹ: ವಿಜಯವಾಣಿ/ ಅಮೃತವಾಣಿ

Saturday, January 3, 2015

ಅಮೃತವಾಣಿ - ೬

ರಥಂ ಶರೀರಂ ಪುರುಷಸ್ಯ ರಾಜನ್ ಆತ್ಮಾ ನಿಯತೇಂದ್ರಿಯಾಣ್ಯಸ್ಯ ಚಾಶ್ವಾಃ |
ತೈರಪ್ರಮತ್ತಃ ಕುಶಲೀ ಸದಶ್ವೈರ್ದಾಂತೈಃ ಸುಖಂ ಯಾತಿ ರಥೀವ ಧೀರಃ ||

ಮಾನವನ ಶರೀರವೇ ರಥ. ಮನಸ್ಸು ಈ ರಥದ ಸಾರಥಿ. ಜ್ಞಾನೇಂದ್ರಿಯ-ಕರ್ಮೇಂದ್ರಿಯಗಳು ರಥದ ಕುದುರೆಗಳು. ಇವುಗಳನ್ನು ವಶದಲ್ಲಿಟ್ಟುಕೊಂಡು ಜಾಗರೂಕತೆಯಿಂದ ಇರುವ ಜಾಣನು (ಜೀವಾತ್ಮನು) ನಿಯಂತ್ರಿತವಾದ ಕುದುರೆಗಳಿಂದ ಶೋಭಿಸುವ ರಥದಲ್ಲಿ ಕುಳಿತು ಸುಖವಾಗಿ ಪಯಣಿಸುವ ಧೀರ ರಥಿಕನಂತೆ, ಸುಗಮವಾಗಿ ಬಾಳಿನಲ್ಲಿ ಪಯಣಿಸುತ್ತಾನೆ.

ಉದ್ಯೋಗಪರ್ವ (ಮಹಾಭಾರತ) / ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ
ಮೂಲ ಸಂಗ್ರಹ: ವಿಜಯವಾಣಿ / ಅಮೃತವಾಣಿ