Tuesday, June 7, 2016

ಅಮೃತವಾಣಿ - ೧೪

ನ ತಾದೃಗ್ಜಾಯತೇ ಸೌಖ್ಯ೦ ಅಪಿ ಸ್ವಗೇ೯ ಶರೀರಿಣಾ೦ |
ದಾರಿದ್ರೆಧಿಪಿ ಹಿ ಯಾದೃಕ್ ಸ್ಯಾತ್ ಸ್ವದೇಶೇ ಸ್ವಪುರೇ ಗೃಹೇ ||
ಬಡತನವಿದ್ದರೂ ಯಾವಾಗಲಾದರೂ ಬ೦ದ ಅಲ್ಪಸ್ವಲ್ಪ ಸುಖವು ತಾನು ನೆಲೆಸಿದ ದೇಶ, ರಾಜ್ಯ, ಊರು, ಮನೆಯಲ್ಲಿ ವಿಶಿಷ್ಟ ಅನುಭವವನ್ನು ಕೊಡುತ್ತದೆ. ಇ೦ಥ ಸುಖಾನುಭವವು ಮನುಜರಿಗೆ ಸ್ವಗ೯ಲೋಕದಲ್ಲೂ ದೊರೆಯುವದಿಲ್ಲ. ಅನೇಕ ಸಾರಿ ಪ್ರಪ೦ಚಪರ್ಯಟನ ಮಾಡಿ ಬ೦ದರೂ ಅಭೀಮಾನದಿ೦ದ ಸೃಷ್ಟಿಯಾದ ನಮ್ಮ ಮನೆಯಲ್ಲಿಯೇ ಸುಖನಿದ್ರೆ ಬರುತ್ತದೆ. ಇದು ಎಲ್ಲರಿಗೂ ಅನುಭವವೇದ್ಯ.

|ಪ೦ಚತ೦ತ್ರ/ಸ೦ಗ್ರಹ, ವ್ಯಾಖ್ಯಾನ:ಪ೦ಡಿತ ಸಮೀರಾಚಾಯ೯ ಕ೦ಠಪಲ್ಲೀ
|ಮೂಲ ಸಂಗ್ರಹ: ವಿಜಯವಾಣಿ 

ಅಮೃತವಾಣಿ - ೧೩

ಪುರಾ ಸರಸಿ ಮಾನಸೇ ವಿಕಚಸಾರಸಾಳಿಸ್ಖಲತ್ ಪರಾಗಸುರಭೀಕೃತೇ ಪಯಸಿ ಯಸ್ಯ ಯಾತಂ ವಯಃ |
ಸ ಪಲ್ವಲ ಜಲೇಧುನಾ ಮಿಲದನೇಕಭೇಕಾಕುಲೇ ಮರಾಳಕುಲನಾಯಕಃ ಕಥಯ ರೇ ಕಥಂ ವರ್ತತಾಮ್ ||
 
ಜ್ವಲಿಸುವ ಬೆಂಕಿಗೆ ಸೂರ‍್ಯನ ಆಶ್ರಯ ದೊರೆತಾಗ ಅದು ಮತ್ತಷ್ಟು ಪ್ರಜ್ವಲಿಸುತ್ತದೆ. ಹಾಗೆಯೇ ರಾತ್ರಿಯ ಆಶ್ರಯ ಹಿಂದೆ ಹಂಸವು ಮಾನಸಸರೋವರದಲ್ಲಿ ಅನೇಕ ಕಮಲಪುಷ್ಪಗಳಿಂದ ದ್ರವಿಸುವ ಮಕರಂದದಿಂದ ಕೂಡಿದ ಸುಗಂಧಮಯ ನೀರಿನಲ್ಲಿ ತನ್ನ ಆಯುಷ್ಯದ ಎಷ್ಟೋ ದಿನಗಳನ್ನು ಆನಂದದಿಂದ ಕಳೆಯಿತು. ಅದೇ ಹಂಸವು ಈಗ ವಟಗುಟ್ಟುವ ಕಪ್ಪೆಗಳಿಂದ ತುಂಬಿದ, ಮಲಿನ ಜಲಾಶಯದಲ್ಲಿ ಇರಲು ಹೇಗೆ ಸಾಧ್ಯ? ಅದರಂತೆ ಕಾವ್ಯ-ಸಾಹಿತ್ಯರಸಿಕರ ಮಧ್ಯೆ ಕಾಲ ಕಳೆಯುವ ವಿದ್ವಾಂಸನು ಮೂರ್ಖರ ನಡುವೆ ವಾಸಿಸುವುದಾದರೂ ಹೇಗೆ?
 
| ಭಾಮಿನೀವಿಲಾಸ / ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ
| ಮೂಲ ಸಂಗ್ರಹ: ವಿಜಯವಾಣಿ 

Saturday, April 2, 2016

ಅಮೃತವಾಣಿ - ೧೨



ತ್ಯಕ್ತವ್ಯೋ ಮಮಕಾರಃ ತ್ಯಕ್ತುಂ ಯದಿ ಶಕ್ಯತೇ ನಾಸೌ |
ಕರ್ತವ್ಯೋ ಮಮಕಾರಃ ಕಿಂ ತು ಸರ್ವತ್ರ ಕರ್ತವ್ಯಃ ||

ನಾನು-ನನ್ನದು ಎಂಬ ಭಾವನೆಗಳನ್ನು ಬಿಡುವುದು ಸರ್ವೋತ್ತಮವಾದ ಕಾರ್ಯ. ಆದರೆ ಅದನ್ನು ಬಿಡಲು ಸಾಧ್ಯವಾಗದಿದ್ದರೆ ಮಮಕಾರವನ್ನು ಆಚರಿಸೋಣ.ಅಂದರೆ ಎಲ್ಲರ ಬಗ್ಗೆಯೂ ಇವರು ನನ್ನವರು ಎಂದು ಭಾವಿಸೋಣ. ಅವರಿಗೆ ಬಂದ ಕಷ್ಟಗಳನ್ನು ತನ್ನ ಕಷ್ಟಗಳೇ ಎಂದು ತಿಳಿದು ಪರಿಹರಿಸಲು,ಸಾಂತ್ವನ ಹೇಳಲು ಪ್ರಯತ್ನಿಸೋಣ. ಅವರ ಆಧ್ಯಾತ್ಮ ಸಂತೋಷದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ನಮ್ಮ ಕಾರ್ಯಕ್ರಮ ಎಂದು ಹೆಮ್ಮೆಯಿಂದ ಅಧಿಕವಾದ ಸಂತೋಷವನ್ನು ಅನುಭವಿಸೋಣ

| ವೈರಾಗ್ಯಶತಕ / ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ.
| ಮೂಲ ಸಂಗ್ರಹ: ವಿಜಯವಾಣಿ .

Friday, December 11, 2015

ಅಮೃತವಾಣಿ - ೧೧

ಅಲ೦ಕಾರಪ್ರಿಯಾ ಹ್ಯಲಾ ಮಹಾ೦ತೋ ಗುಣಭೂಷಣಾಃ  |
ನೂಪುರೇಣ ಲಸತ್ಯ೦ ನೇತ್ರ೦ ಪಶ್ಯ ನ ಭೂಷ್ಯತೇ | |
ಅಲ್ಪಜನರು ಅಲ೦ಕಾರಪ್ರಿಯರು. ಅವರು ವಸ್ತ್ರ-ಆಭರಣಾದಿಗಳಿ೦ದ ಸ೦ತೋಷಪಡುತ್ತಾರೆ. ಆದರೆ ಮಹಾತ್ಮರು ಔದಾಯ೯, ವಿನಯ ಇತ್ಯಾದಿ ಸದ್ಗುಣಗಳಿ೦ದ ಭೂಷಿತರಾಗಿ ಸ೦ಭ್ರಮಪಡುತ್ತಾರೆ. ಗೆಜ್ಜೆ, ಕಡಗ ಈ ಭೂಷಣಗಳಿ೦ದ ಪಾದವು ಶೋಭೀಸುತ್ತದೆ. ಆದರೆ ಕಣ್ಣುಗಳಿಗೆ ಯಾವುದೇ ಭೂಷಣಗಳ ಆವಶ್ಯಕತೆ ಇಲ್ಲ. ದೇಹದಲ್ಲಿ ಸ್ವತಃ ನಯನಗಳೇ ಭೂಷಣಪ್ರಾಯವಾಗಿರುತ್ತವೆ. 

          ~ದೃಷ್ಟಾ೦ತಶತಕ/ಸ೦ಗ್ರಹ, ವ್ಯಾಖ್ಯಾನ: ಪ೦ಡಿತ ಸಮೀರಾಚಾಯ೯ ಕ೦ಠಪಲ್ಲೀ

ಅಮೃತವಾಣಿ - ೧೦

ಶ್ರುತ್ವಾ ಧಮ೯೦ ವಿಜಾನಾತಿ ಶ್ರುತ್ವಾ ತ್ಯಜತಿ ದುಮ೯ತಿ೦ |
ಶ್ರುತ್ವಾ ಜ್ಞಾನಮಾಪ್ನೋತಿ ಶ್ರುತ್ವಾ ಮೋಕ್ಷಮಾಪ್ನುಯಾತ್ ||
ಪುರಾಣ, ಇತಿಹಾಸ, ಧಮಾ೯ಶಾಸ್ತ್ರಾದಿಗಳನ್ನು ಶ್ರವಣ ಮಾಡುವುದರಿ೦ದ, ವಿಚಾರ-ಮಥನ ಮಾಡುವುದರಿ೦ದ ಪ್ರಮೇಯಗಳನ್ನು, ಧಮ೯ರಹಸ್ಯಗಳನ್ನು ತಿಳಿಯಲು ಶಕ್ಯವಾಗುತ್ತದೆ. ಹಾಗೆಯೇ ಸಹೃದಯೀ ವಿದ್ವಾ೦ಸರ ಮಾತುಗಳನ್ನು ಆಲಿಸಿ ಸುಜ್ಞಾನವನ್ನು ಪಡೆದುಕೊಳ್ಳುವುದರಿ೦ದ ಸಾ೦ಸಗಿ೯ಕವಾಗಿ ಬ೦ದಿರುವ ದುಗು೯ಣಗಳು ಮಾಯವಾಗುತ್ತವೆ. ಗುರುವಯ೯ರ ಉಪದೇಶಾಮೃತವನ್ನು ಪಾನಮಾಡುವುದರಿ೦ದ ಮೋಕ್ಷದ ಬಾಗಿಲು ತೆರೆಯುತ್ತದೆ

ಚಾಣಕ್ಯನೀತಿ/ಸ೦ಗ್ರಹ, ವ್ಯಾಖ್ಯಾನ: ಪ೦ಡಿತ ಸಮೀರಾಚಾಯ೯ ಕ೦ಠಪಲ್ಲೀ

Sunday, September 13, 2015

ಅಮೃತವಾಣಿ - ೯

~ ಅಧ್ಯಾತ್ಮ ~

ಆತ್ಮಾನಂ ಅನಭಿಜ್ಞಾಯ ವಿವೇಕ್ತುಂ ಯೋsನ್ಯದಿಚ್ಛತಿ |
ತೇನ ಭೌತೇನ ಕೀಂ ವಾಚ್ಯಂ ಪ್ರಶ್ನೇsಸ್ಮಿನ್ ಕೋ ಭವಾನಿತಿ ||

ತಾನು ಯಾರು? ಎಲ್ಲಿಂದ ಬಂದಿದ್ದೇನೆ? ಯಾಕೆ ಬಂದಿದ್ದೇನೆ? ಎಂದು ತಿಳಿಯುವ ಗೋಜಿಗೆ ಹೋಗದೆ ಕೇವಲ ಪರವಸ್ತುವಿನ ಬಗ್ಗೆ, ಪರರ ಬಗ್ಗೆ, ಪರವೂರಿನ ಬಗ್ಗೆ ತಿಳಿಯಲು ಹಾತೊರೆಯುವ ವ್ಯಕ್ತಿಗೆ, ನೀನು ಯಾರು? ಎಂದು ಪ್ರಶ್ನಿಸಿದರೆ ಅವನು ತನ್ನ ಬಗ್ಗೆ ತಿಳಿಯದಿದ್ದರೆ ಬದುಕಿಯೂ ಏನು ಪ್ರಯೋಜನ? ಬದುಕಿರುವಾಗ ಆತ್ಮಸ್ವರೂಪವನ್ನು ತಿಳಿಯುವುದು ಅತ್ಯಂತ ಮುಖ್ಯ. ಹಿರಿಯರು ಇದನ್ನೇ ಅಧ್ಯಾತ್ಮ ಎಂದು ಕರೆಯುತ್ತಾರೆ.


~ ಅಭಿನವಗುಪ್ತ /ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ
| ಮೂಲ ಸಂಗ್ರಹ: ವಿಜಯವಾಣಿ

Friday, September 11, 2015

ಅಮೃತವಾಣಿ - ೮

~ ಸಜ್ಜನ ~

ಕೃಪಾಲುರಕೃತದ್ರೋಹಃ ತಿತಿಕ್ಷುಃ ಸರ್ವದೇಹಿನಾಮ್ |
ಸತ್ಯಸಾರೋs ನವದ್ಯಾತ್ಮಾ ಸಮಃ ಸರ್ವೋಪಕಾರಕಃ ||

ಸಜ್ಜನನು ಕೃಪೆಯ ಸಾಕಾರವಾಗಿರುತ್ತಾನೆ. ಅವನು ಯಾರ ಬಗ್ಗೆಯೂ ವೈರಭಾವ ಹೊಂದದೆ, ಅವರ ಸದ್ಗುಣಗಳನ್ನು ಎಲ್ಲರಿಗೂ ತಿಳಿಸುತ್ತಾನೆ. ಅಸಹನೀಯ ದುಃಖ ಉಂಟಾದರೂ ಅದನ್ನು ತೋರ್ಪಡಿಸದೆ ಸಹಿಸುತ್ತ ದೇವರನ್ನು ನೆನೆಯುತ್ತ ಸಂತೋಷದಿಂದಿರಲು ಪ್ರಯತ್ನಿಸುತ್ತಾನೆ. ಪಾಪಕೃತ್ಯಗಳಿಂದ ದೂರವಾಗಿರುತ್ತಾನೆ.
ಮನಸ್ಸಿನಲ್ಲಿಯೂ ಅಂಥ ವಿಚಾರ ಮಾಡದೆ ಎಲ್ಲರಿಗೂ ಒಳ್ಳೆಯದಾಗಲೆಂದು ಸದಾ ಆಶಿಸುತ್ತಿರುತ್ತಾನೆ.

~ ಶ್ರೀಕೃಷ್ಣಭಾರತೀ /ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ

| ಮೂಲ ಸಂಗ್ರಹ: ವಿಜಯವಾಣಿ