Friday, September 11, 2015

ಅಮೃತವಾಣಿ - ೮

~ ಸಜ್ಜನ ~

ಕೃಪಾಲುರಕೃತದ್ರೋಹಃ ತಿತಿಕ್ಷುಃ ಸರ್ವದೇಹಿನಾಮ್ |
ಸತ್ಯಸಾರೋs ನವದ್ಯಾತ್ಮಾ ಸಮಃ ಸರ್ವೋಪಕಾರಕಃ ||

ಸಜ್ಜನನು ಕೃಪೆಯ ಸಾಕಾರವಾಗಿರುತ್ತಾನೆ. ಅವನು ಯಾರ ಬಗ್ಗೆಯೂ ವೈರಭಾವ ಹೊಂದದೆ, ಅವರ ಸದ್ಗುಣಗಳನ್ನು ಎಲ್ಲರಿಗೂ ತಿಳಿಸುತ್ತಾನೆ. ಅಸಹನೀಯ ದುಃಖ ಉಂಟಾದರೂ ಅದನ್ನು ತೋರ್ಪಡಿಸದೆ ಸಹಿಸುತ್ತ ದೇವರನ್ನು ನೆನೆಯುತ್ತ ಸಂತೋಷದಿಂದಿರಲು ಪ್ರಯತ್ನಿಸುತ್ತಾನೆ. ಪಾಪಕೃತ್ಯಗಳಿಂದ ದೂರವಾಗಿರುತ್ತಾನೆ.
ಮನಸ್ಸಿನಲ್ಲಿಯೂ ಅಂಥ ವಿಚಾರ ಮಾಡದೆ ಎಲ್ಲರಿಗೂ ಒಳ್ಳೆಯದಾಗಲೆಂದು ಸದಾ ಆಶಿಸುತ್ತಿರುತ್ತಾನೆ.

~ ಶ್ರೀಕೃಷ್ಣಭಾರತೀ /ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ

| ಮೂಲ ಸಂಗ್ರಹ: ವಿಜಯವಾಣಿ


Monday, April 6, 2015

ಭಕ್ತಿಯ ಶಕ್ತಿ ... !!!




ಭಕ್ತಿಯು  ಸೇರಿದರೆ ಅನ್ನಕ್ಕೆ,
ಅನ್ನವು  ಪ್ರಸಾದವು,
ಭಕ್ತಿಯು  ಸೇರಿದರೆ ನೀರಿಗೆ      
ನೀರು ತೀ‍ರ್ಥ / ಚರಣಾಮೃತವು,
ಭಕ್ತಿಯು  ಸೇರಿದರೆ ಹಸಿವಿಗೆ,
ಹಸಿವು ಉಪವಾಸವು,
ಭಕ್ತಿಯು  ಸೇರಿದರೆ ಪ್ರಯಾಣಕ್ಕೆ,
ಪ್ರಯಾಣವು ತೀರ್ಥಯಾತ್ರೆಯು,
ಭಕ್ತಿಯು  ಸೇರಿದರೆ ಸಂಗೀತಕ್ಕೆ,
ಸಂಗೀತವು ಕೀರ್ತನೆಯು,
ಭಕ್ತಿಯು  ಸೇರಿದರೆ ಮನೆಗೆ,
ಮನೆಯು ಮಂತ್ರಾಲಯವು,
ಭಕ್ತಿಯು  ಸೇರಿದರೆ ಕಾಯಕವ,
ಕಾಯಕವು ಸೇವೆಯು,
ಭಕ್ತಿಯು  ಸೇರಿದರೆ ಕೆಲಸಕ್ಕೆ,
ಕೆಲಸವು ಕರ್ಮವು,
ಮತ್ತು
ಭಕ್ತಿಯು  ಸೇರಿದರೆ ಮನುಷ್ಯನ,
ಮನುಷ್ಯನು ಮಾನವನು – ಆಗಿ ಪರಿವರ್ತನೆ ಆಗುವುದು.

ಭಕ್ತಿಯ ಜೊತೆಗೆ  ಜ್ಞಾನ, ನಂಬಿಕೆ ಹಾಗೂ ಧಾರಣೆಗಳಿಂದ ಇವು ತುಂಬ ಸುಲಭವಾಗಿ ಪರಿವರ್ತನೆಯಾಗುವುವು.

~ ಅನಾಮಧೇಯ

Saturday, January 24, 2015

ಅಮೃತವಾಣಿ - ೭

ಪ್ರದಾನಂ ಪ್ರಚ್ಛನ್ನಂ ಗೃಹಮುಪಗತೇ ಸಂಭ್ರಮವಿಧಿಃ ಪ್ರಿಯಂ ಕೃತ್ವಾ ಮೌನಂ ಸದಸಿ ಕಥನಂ ಚಾಪ್ಯುಪಕೃತೇಃ |
ಅನುತ್ಸೇಕೋ ®PÁëöäöå ನಿರಭಿಭವಸಾರಾಃ ಪರಕಥಾಃ ಸತಾಂ ಕೇನೋದ್ದಿಷ್ವಂ ವಿ‌ಷಮಸಿಧಾರಾವ್ರತಮಿದಮ್ ||

ರಹಸ್ಯವಾಗಿ ದಾನ ಮಾಡುವುದು, ಮನೆಗೆ ಬಂದ ಅತಿಥಿ-ಅಭ್ಯಾಗತರನ್ನು ಸಂತೋಷದಿಂದ ಸತ್ಕರಿಸುವುದು, ಮಾಡಿದ ಸತ್ಕಾರ್ಯಗಳ ಬಗ್ಗೆ ಹೇಳಿಕೊಳ್ಳದಿರುವುದು, ಇತರರು ಮಾಡಿದ ಉಪಕಾರವನ್ನು ಸಾರ್ವಜನಿಕವಾಗಿ ಹೇಳುವುದು, ಐಶ್ವರ್ಯ ಬಂದಾಗ ಅದನ್ನು ಗತ್ತಿನಿಂದ ಪ್ರದರ್ಶಿಸದಿರುವುದು, ಮತ್ತೊಬ್ಬರ ಬಗ್ಗೆ ಮಾತನಾಡುವಾಗ ನಿಂದನೆಯ ಶಬ್ದಗಳು ಬರದಂತೆ ಜಾಗೃತೆ ವಹಿಸುವುದು - ಹೀಗೆ ಅಲಗಿನ ಮೇಲಿನ ನಡೆಯಂತಿರುವ ಕಠೋರ ವೃತವನ್ನು ಸಜ್ಜನರಿಗೆ ಯಾರು ವಿಧಿಸಿರಬಹುದು?

| ನೀತಿ ಶತಕ / ಸಂಗ್ರಹ, ವ್ಯಾಖ್ಯಾನ: ಪಂಡೀತ ಸಮೀರಾಚಾರ್ಯ ಕಂಠಪಲ್ಲೀ
|ಮೂಲ ಸಂಗ್ರಹ: ವಿಜಯವಾಣಿ/ ಅಮೃತವಾಣಿ

Saturday, January 3, 2015

ಅಮೃತವಾಣಿ - ೬

ರಥಂ ಶರೀರಂ ಪುರುಷಸ್ಯ ರಾಜನ್ ಆತ್ಮಾ ನಿಯತೇಂದ್ರಿಯಾಣ್ಯಸ್ಯ ಚಾಶ್ವಾಃ |
ತೈರಪ್ರಮತ್ತಃ ಕುಶಲೀ ಸದಶ್ವೈರ್ದಾಂತೈಃ ಸುಖಂ ಯಾತಿ ರಥೀವ ಧೀರಃ ||

ಮಾನವನ ಶರೀರವೇ ರಥ. ಮನಸ್ಸು ಈ ರಥದ ಸಾರಥಿ. ಜ್ಞಾನೇಂದ್ರಿಯ-ಕರ್ಮೇಂದ್ರಿಯಗಳು ರಥದ ಕುದುರೆಗಳು. ಇವುಗಳನ್ನು ವಶದಲ್ಲಿಟ್ಟುಕೊಂಡು ಜಾಗರೂಕತೆಯಿಂದ ಇರುವ ಜಾಣನು (ಜೀವಾತ್ಮನು) ನಿಯಂತ್ರಿತವಾದ ಕುದುರೆಗಳಿಂದ ಶೋಭಿಸುವ ರಥದಲ್ಲಿ ಕುಳಿತು ಸುಖವಾಗಿ ಪಯಣಿಸುವ ಧೀರ ರಥಿಕನಂತೆ, ಸುಗಮವಾಗಿ ಬಾಳಿನಲ್ಲಿ ಪಯಣಿಸುತ್ತಾನೆ.

ಉದ್ಯೋಗಪರ್ವ (ಮಹಾಭಾರತ) / ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ
ಮೂಲ ಸಂಗ್ರಹ: ವಿಜಯವಾಣಿ / ಅಮೃತವಾಣಿ



Saturday, November 29, 2014

ಅಮೃತವಾಣಿ - ೫



ಅರ್ಥಾ ವೈವಾಚಿ ನಿಯತಾಃ ವಾಙ್ಮೂಲಾ: ವಾಚಿ ಮಿಶ್ರಿತಾಃ |
ಯೋ ವೈತಾಂ ಸ್ತೇಯಯೇದ್ವಾಚಂ ಸ ಸರ್ವಸ್ತೇಯಕೃನ್ನರಃ ||

ಅರ್ಥವು ಮಾತಿನಲ್ಲಿ ಅಡಗಿದೆ, ಅರ್ಥಕ್ಕೆ ಮಾತೇ ಮೂಲ, ಅರ್ಥ ಹಾಗೂ ಮಾತುಗಳು ಪರಸ್ಪರ ಬೆರೆತಿವೆ. ಯಾರು ಮಾತನ್ನು ಸುಳ್ಳಾದ, ವಿಪರೀತವಾದ ಅರ್ಥವನ್ನು ಕೊಡುವಂತೆ ಮಾತನಾಡುತ್ತಾರೆಯೋ, ಅವರು ಎಲ್ಲ ರೀತಿಯಲ್ಲೂ ಕಳ್ಳತನವನ್ನು ಮಾಡಿದ ದೋ‍ಷಕ್ಕೆ ಭಾಗಿಯಾಗುತ್ತಾರೆ. ಇಂಥವರು ಜಗತ್ತಿನಲ್ಲಿ ಅನರ್ಥವನ್ನು ಉಂಟು ಮಾಡುವ ಅಪಾಯವನ್ನು ತಂದೊಡ್ಡುತ್ತಾರೆ. ಆದ್ದರಿಂದ ಯಾವಾಗಲೂ ಹಿತಕರವಾಗಿರುವ, ನೈಜ ಅರ್ಥಗಳನ್ನು ಒಳಗೊಂಡ ಮಾತನ್ನೇ ಆಡುತ್ತಿರಬೇಕು.


ನಾರದ ಸ್ಮೃತಿ / ಸಂಗ್ರಹ, ವ್ಯಾಖ್ಯಾನ: ಪಂಡೀತ ಸಮೀರಾಚಾರ್ಯ ಕಂಠಪಲ್ಲೀ
ಮೂಲ ಸಂಗ್ರಹ: ವಿಜಯವಾಣಿ/ ಅಮೃತವಾಣಿ



Wednesday, January 1, 2014

ಅಮೃತವಾಣಿ - ೪

ಅಮೃತಸ್ಯೇವ ಸಂತೃಪ್ಯೇದವಮಾನಸ್ಯ ತತ್ವವಿತ್ |
ವಿಷಸ್ಯೇವೋದ್ವಿಜೇನ್ನಿತ್ಯಂ ಸಮ್ಮಾನಸ್ಯ ವಿಚಕ್ಷಣಃ ||
ತತ್ವಜ್ನಾನಿಯಾದ ಸಾಧಕ ಪುರು‍ಷನು ಯಾರಾದರೂ ತನ್ನನ್ನು ನಿಂದನೆ ಮಾಡಿದರೆ,
ಅವಮಾನ ಮಾಡಿದರೆ ಅದನ್ನು ಅಮೃತವೆಂದೇ ಭಾವಿಸಿ ಸಂತೃಪ್ತನಾಗಿ ಜೀವಿಸಬೇಕು.
ಒಂದು ವೇಳೆ ಯಾರಾದರೂ ತನ್ನ ಬಗ್ಗೆ ಪ್ರಶಂಸೆ ಮಾಡಿದರೆ, ಸನ್ಮಾನವನ್ನು ಮಾಡಿದರೆ ಅದನ್ನು ವಿ‌ಷವೆಂದು ತಿಳಿದು ಉದ್ವಿಗ್ನ ಮನಸ್ಕನಾಗಿ ಮೌನಿಯಾಗಿದ್ದು ಬಿಡಬೇಕು.
ಹೀಗೆ ಹೊಗಳಿಕೆಗೆ ಹಿಗ್ಗದೇ ತೆಗಳಿಕೆಗೆ ಕುಗ್ಗದೇ ಸಮಚಿತ್ತದಿಂದ ಇರುವುದೇ ಮಹತ್ತರವಾದ ಸಾಧನೆ ಎನಿಸಿದೆ.

ಜೈಗೀಷವ್ಯ ವಚನ / ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ 


ಮೂಲ ಸಂಗ್ರಹ : ವಿಜಯವಾಣಿ/ಅಮೃತವಾಣಿ

Monday, December 2, 2013

ಅಮೃತವಾಣಿ - ೩

ಅಧನಂ ದುರ್ಬಲಂ ಪ್ರಾಹುಃ ಧನೇನ ಬಲವಾನ್ ಭವೇತ್ ಸರ್ವಂ ಧನವತಾ ಪ್ರಾಪ್ಯಂ ಸರ್ವಂ ತರತಿ ಕೋಶವಾನ್ |
ಕೋಶೇನ ಧರ್ಮಃ ಕಾಮಶ್ಚ ಪರಲೋಕಸ್ತಥಾ ಹ್ಯಯಮ್ ತಂ ಚ ಧರ್ಮೇಣ ಲಿಪ್ಸೇತ ನಾಧರ್ಮೇಣ ಕದಾಚನ ||
ಬಲಾಬಲಗಳ ತೀರ್ಮಾನವಾಗುವುದೇ ಧನದಿಂದ, ಈ ಲೋಕದಲ್ಲಿ ಧನವಿಲ್ಲದವನನ್ನು ದುರ್ಬಲನೆಂದು ಕರೆಯುತ್ತಾರೆ. ಧನವಿದ್ದವನು ಬಲಶಾಲಿಯೆನಿಸುತ್ತಾನೆ. ಸನ್ಮಾನ, ಗೌರವ, ಪ್ರಶಸ್ತಿ, ಮುಂತಾದವುಗಳು ಹಣವಂತನಿಗೇ ಲಭಿಸುತ್ತವೆ. ಧನಸಮೃದ್ಧಿಯುಳ್ಳವನು ಎಲ್ಲ ಕಷ್ಟಗಳಿಂದಲೂ ಮುಕ್ತನಾಗುತ್ತಾನೆ. ಅರ್ಥಸಂಪಾದನೆಯಿಂದ ಧರ್ಮ ಹಾಗೂ ಕಾಮಗಳು, ಇಹಲೋಕ ಮತ್ತು ಪರಲೋಕಗಳು ಪ್ರಾಪ್ತವಾಗುತ್ತವೆ.
ಈ ವಿ‌ಷಯದಲ್ಲಿ ನೆನಪಿಡಬೇಕಾದ ಸಂಗತಿಯೆಂದರೆ ಧನವನ್ನು ಧರ್ಮ, ನ್ಯಾಯಗಳಿಂದಲೇ ಗಳಿಸಬೇಕು. ಯಾವಕಾರಣದಿಂದಲೂ ಅಧರ್ಮ, ಅನ್ಯಾಯಗಳಿಂದ ಧನ ಸಂಪಾದಿಸಬಾರದು.
ಅಧರ್ಮದ ಧನ ಫಲಿಸುವುದೂ ಇಲ್ಲ.
  
 ~ ಶಾಂತಿಪರ್ವ ~ ಮಹಾಭಾರತ/ ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ


ಮೂಲ ಸಂಗ್ರಹ : ವಿಜಯವಾಣಿ/ಅಮೃತವಾಣಿ