Friday, January 7, 2022

ಅಮೃತವಾಣಿ – ೧೮

ಯೋವಜಾನಾತಿ ಶಕ್ತೋಪಿ ದ್ವೇಷಾಲ್ಲೋಭಾನ್ಮದಾದಪಿ |

ಪೂರ್ವೋಕ್ತಪೋಷಾನ್ ಸಂಪ್ರೇಯಾನ್ ಮೃತೋ ನಿರಯಮುಲ್ಬಣಮ್  ||

ಅಕೀರ್ತಿಂ ಲಭ್ಯತೇ ಜೀವನ್ನಕೀರ್ತೇರ್ಮರಣಂ ವರಂ |

ನೈವ ಗೃಹ್ಣಂತಿ ನಾಮಾಸ್ಯ ಯೋಪಕಿರ್ತಯ ಜೀವತಿ ||

 

ಧನ-ಸಂಪತ್ತುಗಳ ಸಾಧನವಿದ್ದೂ ಸ್ವತಃ ಪೋಷಣೆ ಮಾಡಲು ಸಮರ್ಥನಾಗಿದ್ದರೂ ಆಶ್ರಯಿಸಿ ಬಂದ ಬಂಧುಜನರನ್ನು ಪೋಷ್ಯವರ್ಗದವರನ್ನು ದ್ವೇಷದಿಂದ, ಲೋಭದಿಂದ ಅಥವಾ ಗರ್ವದಿಂದ ಪೋಷಿಸದೇ ಕರ್ತವ್ಯಚ್ಯುತನಾಗಿ ತಿರಸ್ಕಾರಮಾಡುವವನು ಅಪಕೀರ್ತಿಗೆ ಒಳಗಾಗುತ್ತಾನೆ. ಒಂದು ರೀತಿಯಲ್ಲಿ ಬದುಕಿದ್ದರೂ ಸತ್ತಂತೆ. ಇಂಥವನ ಹೆಸರನ್ನು ಹೇಳಲು ಯಾರೂ ಬಯಸುವುದಿಲ್ಲ. ಆದ್ದರಿಂದ ದೇವರು ಅನುಕೂಲ ಕೊಟ್ಟಾಗ ಆಶ್ರಯಿಸಿ ಬರುವವರನ್ನು ಪೋಷಿಸಬೇಕು.  

ಕೃಪೆ/ಮೂಲ ಸಂಗ್ರಹ: ವಿಜಯವಾಣಿ, ||ಶ್ರೀ ವಿಷ್ಣುರಹಸ್ಯ/ಸಂಗ್ರಹ, ವ್ಯಾಖ್ಯಾನ: ಡಾ. ಕಂಠಪಲ್ಲೀ ಸಮೀರಣಾಚಾರ್ಯ, ವೇದಪೀಠ, ಹುಬ್ಬಳ್ಳಿ

 

Sunday, December 12, 2021

 ಅಮೃತವಾಣಿ - 17

ಪರಸ್ಪರಸ್ಯ ಮರ್ಮಾಣಿ ಯೇ ಭಾಷಂತೇ ನರಾಧಮಾಃ |

ತೇ ಏವ ವಿಲಯಂ ಯಾಂತಿ ವಲ್ಮೀಕೋದರ ಸರ್ಪವತ್‌ ||


ಸ್ವಹಿತಾಸಕ್ತಿಯ ರಕ್ಷಣೆಗಾಗಿ ಪರರ ರಹಸ್ಯಗಳನ್ನು ಬಯಲುಮಾಡಿ ನಿಂದನೀಯ ಮಾತುಗಳನ್ನಾಡುವವರು ಹುತ್ತದಲ್ಲಿ ಸಿಕ್ಕ ಹಾವಿನಂತೆ ನಿಶ್ಚಿತವಾಗಿ ವಿನಾಶ ಹೊಂದುತ್ತಾರೆ. ಅನ್ಯರ ರಹಸ್ಯಗಳನ್ನು ಬಯಲುಮಾಡುವ ಮೊದಲು ತನ್ನ ಚಾರಿತ್ರ್ಯದ ಬಗ್ಗೆ ಯೋಚಿಸಬೇಕು. ಹಾಗೂ ಮುಂದೆ ಆಗುವ ಸ್ಥಿತಿಗಳನ್ನು ಪೂರ್ವಾಪರವಾಗಿ ವಿಚಾರಿಸಿ ಮುಂದಿನ ಹೆಜ್ಜೆಯನ್ನಿಡಬೇಕು. ಯಾವುದೇ ಕಾರಣಕ್ಕೂ ಅವಸರಪಡಬಾರದು.

 

ಕೃಪೆ/ಮೂಲ ಸಂಗ್ರಹ:

| ಚಾಣಕ್ಯನೀತಿದರ್ಪಣ /ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ

Sunday, April 14, 2019

ಅಮೃತವಾಣಿ - ೧೬

ಯತ್ರ ಸರ್ವೇsಪಿ ನೇತಾರಃ ಸರ್ವೇ ಪಂಡಿತಮಾನಿನಃ |
ಸರ್ವೇ ಮಹತ್ವಮಿಚ್ಛಂತಿ ತತ್ರ ಕಾರ್ಯಂ ವಿನಶ್ಯತಿ ||

ಒಂದು ಸಂಸ್ಥೆ ಅಥವಾ ಸಮೂಹ ಇದ್ದಾಗ ಅಲ್ಲಿ ಎಲ್ಲರೂ ತಾವೇ ನಾಯಕರಾಗಬೇಕು,
ತಮ್ಮ ಮಾತೇ ಅಂತಿಮವಾಗಬೇಕು ಎಂಬ ಮನೋಭಾವ ಇದ್ದರೆ ಆ ಸಂಸ್ಥೆ-ಸಮೂಹಗಳು ಅಧಃಪತನ ಹೊಂದುತ್ತವೆ.
ತನ್ನನ್ನು ಹೊರತುಪಡಿಸಿ ಅನ್ಯ ಪಂಡಿತನೇ ಇಲ್ಲ, ಜನರೆಲ್ಲ ತನ್ನನ್ನೇ ಪಂಡಿತ ಎಂದು ತಿಳಿಯುತ್ತಾರೆ ಎಂದು ತಿಳಿಯುವುದೂ ಮೂರ್ಖತನವೇ ಆಗಿದೆ.
ಹಾಗೆಯೇ ಎಲ್ಲೆಡೆಯೂ ಪ್ರಥಮ ಸ್ಥಾನ ತನ್ನದೇ ಆಗಬೇಕು, ತನಗೆ ಮಹತ್ವ ಸಿಗಬೇಕು ಎಂದು ಭಾವಿಸಿದರೆ - ಆ ರೀತಿಯಲ್ಲಿ ವರ್ತಿಸಿದರೆ ಕಾರ್ಯ ವಿನಾಶವಾಗುತ್ತದೆ. ಆದ್ದರಿಂದ ಸೌಜನ್ಯ-ವಿನಯಗಳನ್ನು ಜೀವನದಲ್ಲಿ ಅವಶ್ಯವಾಗಿ ರೂಢಿಸಿಕೊಳ್ಳಬೇಕು.

| ನೀತಿಮುಕ್ತಾವಲಿ / ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ
ಮೂಲ ಸಂಗ್ರಹ: ವಿಜಯವಾಣಿ

Friday, April 12, 2019

ಅಮೃತವಾಣಿ - ೧೫


ವಿನಾ ಕಾರ್ಯೇಣ ಯೇ ಮೂಢಾ ಗಚ್ಛಂತಿ ಪರಮಂದಿರಂ|
ಅವಶ್ಯಂ ಲಘುತಾಂ ಯಾಂತಿ ಕೃಷ್ಣಪಕ್ಷೇ ಯಥಾ ಶಶೀ||

ಸುಜ್ಞಾನಿಗಳು, ಗುರುಗಳು ಇವರನ್ನು ಹೊರತುಪಡಿಸಿ ವಿನಾಕಾರಣ ಇತರರ (ಅದರಲ್ಲಿಯೂ ವಿಶೇಷವಾಗಿ ಅಹಂಕಾರಯುಕ್ತರಾದ ಧನವಂತರ) ನಿವಾಸಗಳಿಗೆ ವೃಥಾ ಹೋಗಬಾರದು. ಆಮಂತ್ರಣ ಇದ್ದರೆ, ಅಲ್ಲಿ ಪ್ರೀತಿ ವಿಶ್ವಾಸಗಳು ಇದ್ದರೆ ಮಾತ್ರ ಹೋಗಬೇಕು. ಕರೆಯದೆ ಇದ್ದರೂ ಅಲ್ಲಿಗೆ ಹೋದರೆ ಅಂಥವರು ಮೂರ್ಖರೇ ಸರಿ.

|| ಸುವಚನರತ್ನಾವಲಿ / ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ
ಮೂಲ ಸಂಗ್ರಹ: ವಿಜಯವಾಣಿ

Sunday, October 1, 2017

ರಾವಣ...!!!

ರಾವಣನಾಗುವುದು ಸುಲಭವಲ್ಲ.
ರಾವಣನಲ್ಲಿ ಅಹಂಕಾರದೊಂದಿಗೆ ಪಶ್ಚಾತ್ತಾಪವೂ ಇತ್ತು.
ರಾವಣನಲ್ಲಿ ವ್ಯಸನದೊಂದಿಗೆ ಸಂಯಮವೂ ಇತ್ತು.
ರಾವಣನಲ್ಲಿ ಸೀತೆಯನ್ನು ಅಪಹರಿಸುವಂತಹ ಛಲ ತಾಕತ್ತಿತ್ತು. ಸಮ್ಮತಿಯಿಲ್ಲದೆ ಪರಸ್ರೀಯನ್ನು ಮುಟ್ಟಲಾರೆ ಎಂಬ ಸಂಕಲ್ಪ ಇತ್ತು .  ಸೀತೆಯನ್ನು ಲಂಕೆಯಿಂದ ಜೀವಂತ ಕರೆತಂದದ್ದು ಅದು ರಾಮ  ಆದರೆ ಸೀತೆ ಪವಿತ್ರವಾಗಿ ಉಳಿದ್ದದ್ದು ಅದು ರಾವಣನಿಂದ.
ರಾಮಾ ನಿನ್ನ ಯುಗದಲ್ಲಿ ರಾವಣನೂ ಒಳ್ಳೆಯವನಿದ್ದ. ಹತ್ತಕ್ಕೆ ಹತ್ತೂ ತಲೆಗಳು ಹೊರಗಿನವರಿಗೆ ಕಾಣಿಸುತ್ತಿತ್ತು, ಒಳಗೊ಼ಂದು ಹೊರಗೊಂದು ಇರಲ್ಲಿಲ್ಲ ಆದರೆ ಈಗ ರಾಮನ ಮುಖವಾಡ ತೊಟ್ಟವರ ದರ್ಬಾರಿನಲ್ಲಿ ರಾವಣನನ್ನು ಹುಡುಕುವುದು ಕಷ್ಟ. 
ಪ್ರತಿಸಲ ವಿಜಯದಶಮಿಯಂದು ದಹಿಸಿಕೊಳ್ಳುವ ರಾವಣ ನೆರೆದಿರುವ ಜನಸಂದಣಿಯಲ್ಲಿ ಪ್ರತಿಯೋರ್ವರಲ್ಲಿ ಕೇಳುತ್ತಾನೆ ನಿಮ್ಮಲ್ಲಿ ರಾಮನ್ಯಾರು ನಿಮ್ಮಲ್ಲಿ ರಾಮನ್ಯಾರು?....

~ ಅನಾಮಿಕ 

Tuesday, June 7, 2016

ಅಮೃತವಾಣಿ - ೧೪

ನ ತಾದೃಗ್ಜಾಯತೇ ಸೌಖ್ಯ೦ ಅಪಿ ಸ್ವಗೇ೯ ಶರೀರಿಣಾ೦ |
ದಾರಿದ್ರೆಧಿಪಿ ಹಿ ಯಾದೃಕ್ ಸ್ಯಾತ್ ಸ್ವದೇಶೇ ಸ್ವಪುರೇ ಗೃಹೇ ||
ಬಡತನವಿದ್ದರೂ ಯಾವಾಗಲಾದರೂ ಬ೦ದ ಅಲ್ಪಸ್ವಲ್ಪ ಸುಖವು ತಾನು ನೆಲೆಸಿದ ದೇಶ, ರಾಜ್ಯ, ಊರು, ಮನೆಯಲ್ಲಿ ವಿಶಿಷ್ಟ ಅನುಭವವನ್ನು ಕೊಡುತ್ತದೆ. ಇ೦ಥ ಸುಖಾನುಭವವು ಮನುಜರಿಗೆ ಸ್ವಗ೯ಲೋಕದಲ್ಲೂ ದೊರೆಯುವದಿಲ್ಲ. ಅನೇಕ ಸಾರಿ ಪ್ರಪ೦ಚಪರ್ಯಟನ ಮಾಡಿ ಬ೦ದರೂ ಅಭೀಮಾನದಿ೦ದ ಸೃಷ್ಟಿಯಾದ ನಮ್ಮ ಮನೆಯಲ್ಲಿಯೇ ಸುಖನಿದ್ರೆ ಬರುತ್ತದೆ. ಇದು ಎಲ್ಲರಿಗೂ ಅನುಭವವೇದ್ಯ.

|ಪ೦ಚತ೦ತ್ರ/ಸ೦ಗ್ರಹ, ವ್ಯಾಖ್ಯಾನ:ಪ೦ಡಿತ ಸಮೀರಾಚಾಯ೯ ಕ೦ಠಪಲ್ಲೀ
|ಮೂಲ ಸಂಗ್ರಹ: ವಿಜಯವಾಣಿ 

ಅಮೃತವಾಣಿ - ೧೩

ಪುರಾ ಸರಸಿ ಮಾನಸೇ ವಿಕಚಸಾರಸಾಳಿಸ್ಖಲತ್ ಪರಾಗಸುರಭೀಕೃತೇ ಪಯಸಿ ಯಸ್ಯ ಯಾತಂ ವಯಃ |
ಸ ಪಲ್ವಲ ಜಲೇಧುನಾ ಮಿಲದನೇಕಭೇಕಾಕುಲೇ ಮರಾಳಕುಲನಾಯಕಃ ಕಥಯ ರೇ ಕಥಂ ವರ್ತತಾಮ್ ||
 
ಜ್ವಲಿಸುವ ಬೆಂಕಿಗೆ ಸೂರ‍್ಯನ ಆಶ್ರಯ ದೊರೆತಾಗ ಅದು ಮತ್ತಷ್ಟು ಪ್ರಜ್ವಲಿಸುತ್ತದೆ. ಹಾಗೆಯೇ ರಾತ್ರಿಯ ಆಶ್ರಯ ಹಿಂದೆ ಹಂಸವು ಮಾನಸಸರೋವರದಲ್ಲಿ ಅನೇಕ ಕಮಲಪುಷ್ಪಗಳಿಂದ ದ್ರವಿಸುವ ಮಕರಂದದಿಂದ ಕೂಡಿದ ಸುಗಂಧಮಯ ನೀರಿನಲ್ಲಿ ತನ್ನ ಆಯುಷ್ಯದ ಎಷ್ಟೋ ದಿನಗಳನ್ನು ಆನಂದದಿಂದ ಕಳೆಯಿತು. ಅದೇ ಹಂಸವು ಈಗ ವಟಗುಟ್ಟುವ ಕಪ್ಪೆಗಳಿಂದ ತುಂಬಿದ, ಮಲಿನ ಜಲಾಶಯದಲ್ಲಿ ಇರಲು ಹೇಗೆ ಸಾಧ್ಯ? ಅದರಂತೆ ಕಾವ್ಯ-ಸಾಹಿತ್ಯರಸಿಕರ ಮಧ್ಯೆ ಕಾಲ ಕಳೆಯುವ ವಿದ್ವಾಂಸನು ಮೂರ್ಖರ ನಡುವೆ ವಾಸಿಸುವುದಾದರೂ ಹೇಗೆ?
 
| ಭಾಮಿನೀವಿಲಾಸ / ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ
| ಮೂಲ ಸಂಗ್ರಹ: ವಿಜಯವಾಣಿ