Friday, November 8, 2013

ಅಮೃತವಾಣಿ - ೨

ಯಂ ಮಾತಾಪಿತರೌ ಕ್ಲೇಶಂ ಸಹೇತೇ ಸಂಭವೇ ನೃಣಾಂ |
ನ ತಸ್ಯ ನಿಷ್ಕೃತಿಃ ಶಕ್ಯಾ ಕರ್ತುಂ ವರ್ಷಶತೈರಪಿ || 
ಮಕ್ಕಳು ಹುಟ್ಟುವಾಗ ತಂದೆ-ತಾಯಿಗಳು ಅನುಭವಿಸುವ ಕಷ್ಟ ಅಷ್ಟಿಷ್ಟಲ್ಲ. ಹುಟ್ಟದಿದ್ದರೆ ಅದಕ್ಕಾಗಿ ಕೊರಗುತ್ತಾರೆ.
ಹುಟ್ಟಿದ ಮೇಲೆ ಅವರನ್ನು ದೊಡ್ಡ ವ್ಯಕ್ತಿಗಳಾಗಿ ಹೇಗೆ ಬೆಳೆಸುವುದು ಎಂದು ಆಲೋಚಿಸುತ್ತಾರೆ. 
ಅದಕ್ಕಾಗಿ ತಮ್ಮ ಪ್ರಾಣ-ಧನಗಳನ್ನು ಪರಿಗಣಿಸದೇ ಜೀವನದುದ್ದಕ್ಕೂ ಹೋರಾಡುತ್ತಾರೆ. ಮಕ್ಕಳ ಅಭ್ಯುದಯಕ್ಕಾಗಿ ಕಂಡ ಕಂಡ ದೈವಗಳಿಗೆ ಹರಕೆ ಹೊರತ್ತಾರೆ. ಅಭೀಷ್ಟ ಸಿದ್ಧಿಯಾದರೆ ಅವರಷ್ಟು ಸಂಭ್ರಮ ಪಡುವವರೇ ಇಲ್ಲ.
ಇಂಥ ತಂದೆ ತಾಯಿಗಳ ಋಣವನ್ನು ತೀರಿಸಲು ಮಕ್ಕಳಾದವರು ನೂರು ವರ್ಷ ಸೇವೆ ಮಾಡಿದರೂ ಸಾಧ್ಯವಿಲ್ಲ. 

~ ಮನುಸ್ಮೃತಿ/ ಸಂಗ್ರಹ, ವ್ಯಾಖ್ಯಾನ: ಪಂಡಿತ ಸಮೀರಾಚಾರ್ಯ ಕಂಠಪಲ್ಲೀ 

ಮೂಲ ಸಂಗ್ರಹ : ವಿಜಯವಾಣಿ/ಅಮೃತವಾಣಿ 

Friday, November 1, 2013

ಅಮೃತವಾಣಿ - ೧

ಲೋಕದ್ವಯಪ್ರತಿಭಯೈಕನಿದಾನಮೇತದ್ಧಿಕ್ ಪ್ರಾಣಿನಾಂ ಋಣಮಹೋ ಪರಿಣಾಮಘೋರಮ್ |
ಏಕಃ ಸ ಏವ ಹಿ ಪುಮಾನ್ ಪರಮಸ್ತ್ರಿಲೋಕೇ ಕ್ರುದ್ಧಸ್ಯ ಯೇನ ಧನಿಕಸ್ಯ ಮುಖಂ ನ ದೃಷ್ಟಮ್ ||
ಇಹಲೋಕದಲ್ಲಾಗಲಿ, ಪರಲೋಕದಲ್ಲಾಗಲಿ ಮನುಷ್ಯರಿಗೆ ಘನಘೋರವಾದ ದುಃಖಾಂತ್ಯದ ದರ್ಶನವನ್ನು ಮಾಡಿಸುವ ಭಯದ ಮೂಲವೇ ಸಾಲ.
ಎಲ್ಲ ಬಾಧೆಗಳಿಗಿಂತಲೂ ಸಾಲಬಾಧೆ ಭಯಂಕರವಾದದ್ದು. ಕೋಪ ಮಾಡಿಕೊಂಡು ಜನರ ಮಧ್ಯದಲ್ಲಿಯೇ ಅವಮಾನ ಮಾಡುವ, ಸಾಲ ಕೊಟ್ಟ ಶ್ರೀಮಂತನ ಕೆಂಗಣ್ಣಿಗೆ ಯಾವನು ಗುರಿಯಾಗುವುದಿಲ್ಲವೋ ಆ ಮನುಷ್ಯನು ಮೂರು ಲೋಕಗಳಲ್ಲಿಯೇ ಧನ್ಯ ಎಂದು ತಿಳಿಯಬೇಕು.
ಇದಕ್ಕೆ ಪೂರಕವಾಗಿ ಸಾಲವನ್ನು ತರುವಾಗ ಹಾಲು-ಹಣ್ಣುಂಬಂತೆ, ಸಾಲಿಗನು ಬಂದು ಎಳೆವಾಗ ಕಿಬ್ಬದಿಯ ಕೀಲು ಮುರಿದಂತೆ ಎಂದು ಸರ್ವಜ್ಞ ತನ್ನ ವಚನದಲ್ಲಿ ಮಾರ್ಮಿಕವಾಗಿ ನುಡಿದಿದ್ದಾನೆ. 
 ~ ಚಂಡಕೌಶಿಕ ನಾಟಕ / ಸಂಗ್ರಹ, ವ್ಯಾಖ್ಯಾನ : ಪಂಡಿತ ಸಮೀರಾಚಾರ್ಯ ಕಂಠಪಲ್ಲೀ

ಮೂಲ ಸಂಗ್ರಹ : ವಿಜಯವಾಣಿ/ಅಮೃತವಾಣಿ

Wednesday, November 21, 2012

ಕುರುಡ ...!!!

ಅರಸಿದಾಗ ದಾಹ ಹೆಚ್ಚಿತೇ ಹೊರತು
ಮನ ತಣಿಯದೇ ಹೋಯಿತೀಗ,
ಆ ಶೋಧ ಯಾಕೆಂದು ಅರಿಯಲು
ಏನಂದು ತವಕದಿ ಕಾಣಲು
ಕಣ್ಣಿದ್ದು ಕುರುಡನಾದೆನೀಗ...!!!

Tuesday, January 17, 2012

ದೃಷ್ಟಿ .. !!!

ಅವಳ ವಕ್ರ ದೃಷ್ಟಿ ಮೊದಲು ಹೆದರಿಸಿತು,
                      ಮತ್ತೆ ಬೆದರಿಸಿತು,
            ಕೊನೆಗೆ ಮರುಗಿಸಿತು... !!!

Monday, September 5, 2011

ಯಾರಿವಳು ...!!!

ಬೇಕೆನ್ನುವಾಗ ದಬ್ಬಿ, ಬೇಡಾ ಎನ್ನುವಾಗ ತಬ್ಬಿ ಮುದ್ದಾಡುವಳು...!!!

Sunday, January 16, 2011

ಬದನೆಕಾಯಿ ಭಕ್ತ ...!!!

ಆ ಸಂಜಿ ಥಂಡ್ಯಾಗ್ ಆ ಅಡಿಗೆ ಭಟ್ಟನ ಲಿಸ್ಟು ನೋಡಿ ನಂತಲಿನ ಕೆಟ್ಟ ಹೋತ್.... ಮದುವಿ ಮನಿ ಅಡಿಗಿ ಸಂತಿ ಲಿಸ್ಟೊಳಗ ಬದನಿಕಾಯಿ ಮಿಸ್ಸಾಗೇತಿ.. ಮೊದಲ್ ಫ್ಹೋನ್ ಒಗಿ ಸಾವ್ಖಾರ್ ಒಂದ್ ಸರಿ. ಪಕ್ಕಾ ಮಾಡ್ಕೋ ಅಂತ್ ನಮ್ ದೇವ್ರುಗೆ ಹೆಳ್ನಿ. ಲೋಹಿತ್ ಧನಿ ಫ್ಹೋನ್ ಒಗದ್ ಕೆಳೇಬಿಟ್ರು. ನಂಗ್ ಅಂತು ಆಕಡಿ ಏನ್ಹೆಳ್ಯಾರ್ ಅಂತ್ ಲಕ್ಶ್ಯ ಅಲ್ಲೇ ಇತ್ತ್ ಮತ್ತ. ಸಾವ್ಖಾರ್ ಮುಖ ಸಣ್ಣಾಗಿತ್ತು, ಗೊತ್ತಾತ್ ನಂಗ್, ಬದನಿಕಾಯಿ ಮಾಡೂ ವಿಚಾರ್ ಇಲ್ಲಾ. ಲೋಹಿತ್ ಧನಿನೂ ಮುಖಾ ಕೆಳಗ್ ಮಾಡಿ ಮುಂದ್ ನಡದ್ರು. ಯಾಕಂದ್ರ್ ಬದನಿಕಾಯಿ ಇಲ್ಲದ್ ಕಾರ್ಯ ಎಂಥಾದ್ ಪಾ ಇದ್ ಅಂತ್ ಕೊರ್ಯಾಖಃತ್ತಿತ್. ನಂಗಂತು ಗೊತ್ತಿಲ್ಲಾ ಎಲ್ಲಾ ಕಡೆ ಬದನಿಕಾಯಿ ಮಾಡ್ತಾರೋ ಇಲ್ಲೋ ಆದ್ರ ನಮ್ ಕಡೆ ಬೇಕಂದ್ರ್ ಬೇಕ್ ಮತ್ತ್ ಏನರ್ರೇ ಪಂಕ್ಶ್ ನ್ ಇರ್ಲಿ ಅದ.
ಮೊದಲ ನಮಗ್ ಬದ್ನಿಕಾಯಿ ಭಕ್ತರು ಅಂತ್ ಹೆಸರ್ ಬ್ಯಾರೇ ಇಟ್ಟಾರೀ. ಅದೇನ್ ಬದನೆಕಾಯ್ ಅಂತೀರೀ. ಆಹಾ! ಅದರಲ್ಲಿ ಅಂತು ಸಂಕ್ರಾಂತಿ ಬದನೆಕಾಯಿ ಅಹ್ಹಾ... ಬಾಯಾಗ್ ನೀರ್ ಬರ್ತೈತಿ ನೋಡ್ರಿ. ಬದನೆಕಾಯೊಳಗನ ನೂರಾ ಎಂಟ್ ನಮನಿ ಅಡೀಗೀ ಮಾಡ್ತಾರ್ ರ್ರೀ.. :) ಬದನೀಕಾಯಿ ಭರತಾ, ಬದನಿಕಾಯೆ ಎನಿಗಾಯಿ, ಬದನಿಕಾಯ್ ಭಜ್ಜಿ, ಬದನಿಕಾಯ್ ಮೊಸರುಗಾಯಿ, ಬದನೆಕಾಯಿ ಒಮ್ಲೆಟ್ ಅಹಾ ಅದೇ ತರಹಾ ಹೊಸ ಹೊಸ ಪ್ರಯತ್ನಗಳು ಆಗ್ತಾನೇ ಇರ್ತಾವೆ ಅದರಲ್ಲಿ. ನಂಗಂತು ಎಣ್ಣೇಗಾಯ್ ಬದನೀಕಾಯಿ ಅಂದ್ರ ಎನ್ಹೇಳ್ತೀರಿ ಮತ್ತ ಅವತ್ತ ಹರಿ ಬ್ರಹ್ಮ ಪ್ರತ್ಯಕ್ಷ ಆದ್ರೂ ಅದನ್ ಬಿಟ್ಟು ಹೋಗಲ್ಲಾಪ್ಪಾ ಅವ್ರಿಗೆ ಸೆಲ್ಯೂಟ್ ಹೊಡ್ಯಾಕ್. ಹೇಳ್ರಿ ನೀವ್. ಅದ್ರಾಗ್ ಅದರ ತುಂಭದ್ ರುಚಿ, ಎಣ್ಣೆ ಮಸಾಲೆ, ಶೆಂಗಾ ಪುಡಿ, ಮೆಣಸಿನ್ಕಾಯಿ, ಅಬ್ಬಾ ಅದರ್ ಜೋಡಿ ಸಜ್ಜೆ ರೊಟ್ಟಿ ಮತ್ತ್ ಮೊಸರ್ ಆಗ್ಬೇಕ್ ಖತರ್ನಾಕ್ ಮತ್ತ್. ಸ್ವರ್ಗ್ ಕ್ಕೆ ೩ ಗೇಣು ಅಲ್ಲಾ. ಸ್ವರ್ಗಾ ಅಂದ್ರೇ ಬದನೆಕಾಯಿ ತುಂಭಾನೇ. ಚಪಾತಿನೇ ಇರಲೀ ಅಥವಾ ರೊಟ್ಟಿನೇ ಇರಲೀ ಅದ್ರ ಜೊಡಿ ಬದ್ನೆಕಾಯ್ ಇದ್ರೆ ಕಥೀನ ಬ್ಯಾರೇ. ಆ ಆಕಾಶು ಭೂಮೀಗೇನ ಬರ್ತನ್ ಅಂತೈತಿ ಮತ್ತ್. ಹೋಲಿಸಿ ಮತ್ತೊಂದ್ ಹೇಳ್ಬೇಕಂದ್ರ ಈ ಬದ್ನೀಕಾಯಿ ಬಡುರ್ ಚಿಕ್ಕನ್ ನೋಡ್ರೀ. ಇದು ಎಸ್ಟ್ ಮಂದಿಗೀ ಖರೇ ಅನ್ಸತೈತಿ ಮತ್ತ್ ಎಸ್ಟರ್ ಮಟ್ಟಿಗಿ ಸರಿ ಅಂತ್ ಅವ್ರ ಹೇಳ್ಬೇಕ್ ನಮಗ್. ಎನಂತೀರೀ. ಈ ಬದನಿಕಾಯಿ ಮ್ಯಾಲ್ ಎನ್ರೇ ಕೇಳ್ಬೇಕ್ ಅನ್ನಿಸ್ರ್ಯ ಕೇಳ್ರಿ ಮತ್ತ್.

Thursday, September 9, 2010

ದೇವರ ಕೆಲಸ ...!!!

ಸರ್ಕಾರಿ ನೌಕರರು ಯಾಕೆ ಮೊದಲು ತಮ್ಮ ಹೊಟ್ಟೇನಾ ತುಂಬಿಸ್ಕೊತಾರೆ ( ಭ್ರಷ್ಟಾಚಾರ )

ವಿಧಾನ ಸೌಧ ನೋಡಿದೋರ್ ಮಾತ್ರ ತಿಳ್ಕೊತಾರೆ - ಸರ್ಕಾರದ ಕೆಲಸ ದೇವರ ಕೆಲಸ

ದೇವರ ಕೆಲಸ ಹೊಟ್ಟೇ ತುಂಬಿಸ್ಕೊಂಡೇ ಮಾಡೋದು... :) ಏನಂತೀರಾ ?