Saturday, April 9, 2022

ಅಮೃತವಾಣಿ – 19


ಯಥಾ ರಾಜನ್ ಪ್ರಜಾಃ ಸರ್ವಾಃ ಸೂರ್ಯಃ ಪಾತಿ ಗಭಸ್ತಿಭಿಃ|

ಹಂತಿ ಚೈವ ತಥೈವ ತ್ವಂ ಸವಿತುಃ ಸದೃಶೋಭವ||

ಸರ್ವಕಾಲದಲ್ಲಿಯೂ ಸೌಮ್ಯವಾದ ಅಥವಾ ಅಹಿಂಸಾವಾದಗಳಿಂದ ಪ್ರಯೋಜನವು ಫಲಿಸುವುದಿಲ್ಲ. ಅದರಲ್ಲಿಯೂ ದುಷ್ಟರ-ಉಗ್ರರ ವಿಷಯದಲ್ಲಿ ಅಹಿಂಸೆಯು ಹಾಸ್ಯಾಸ್ಪದವಾಗುತ್ತದೆ. ಅಲ್ಲಿ ಶಿಕ್ಷೆಯು ಕಡ್ಡಾಯವಾಗಬೇಕು. ಸೂರ್ಯನು ಮುಂಜಾನೆ ಮತ್ತು ಸಂಜೆ ತನ್ನ ಕೋಮಲ ಕಿರಣಗಳಿಂದ ಜನತೆಯನ್ನು ಸಂತೋಷಪಡಿಸುತ್ತಾನೆ. ಮಧ್ಯಾಹ್ನ ಉಷ್ಣಕಿರಣಗಳಿಂದ ಪ್ರಖರ ಎನಿಸುತ್ತಾನೆ. ಆಗಲೇ ಸೂರ್ಯನ ಅಸ್ತಿತ್ವದ ಜ್ಞಾನವಾಗುತ್ತದೆ. ಹಾಗೆಯೇ ಉಗ್ರವಾದವನ್ನು ದಮನ ಮಾಡಿದಾಗಲೇ ಧರ್ಮದ ಸಂಸ್ಥಾಪನೆಯಾಗುತ್ತದೆ. 


|ವನಪರ್ವ-ಮಹಾಭಾರತ/ಸಂಗ್ರಹ, ವ್ಯಾಖ್ಯಾನ: ಡಾ. ಕಂಠಪಲ್ಲೀ ಸಮೀರಣಾಚಾರ್ಯ, ವೇದಪೀಠ, ಹುಬ್ಬಳ್ಳಿ

ಮೂಲ ಸಂಗ್ರಹ: ವಿಜಯವಾಣಿ ದಿನಪತ್ರಿಕೆ